ವೈಶಿಷ್ಟ್ಯವಾಗಿರುವುದು
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ಕ್ರಿಕೆಟ್, ಬ್ಯಾಡ್ಮಿಂಟನ್, ಕಬಡ್ಡಿ ಚಿನ್ನ ಸೇರಿ ಭಾರತಕ್ಕೆ 100+ ಪದಕಗಳು!
ಚೀನಾದ ಹಾಂಗ್ಝೌನಲ್ಲಿ ನಡೆಯುತ್ತಿರುವ 19ನೇ ಏಷ್ಯನ್ ಗೇಮ್ಸ್ ನಲ್ಲಿ ಭಾರತದ ಅಥ್ಲೀಟ್ ಗಳು ಅದ್ಭುತ ಪ್ರದರ್ಶನ ನೀಡಿದ್ದಾರೆ. ಚಿನ್ನದ ಪದಕಕ್ಕಾಗಿ ನಡೆದ ಪುರುಷರ ಕಬಡ್ಡಿ, ಪುರುಷರ ಕ್ರಿಕೆಟ್, ಪುರುಷರ ಬ್ಯಾಡ್ಮಿಂಟನ್ ಡಬಲ್ಸ್ ಮತ್ತು ಮಹಿಳಾ ಕಬಡ್ಡಿಯಲ್ಲಿ ಭಾರತಕ್ಕೆ ಚಿನ್ನದ ಪದಕ ಒಲಿದಿದೆ.
ಪುರುಷರ ಕಬಡ್ಡಿಯಲ್ಲಿ ಭಾರತೀಯ ತಂಡ ಇರಾನ್ ವಿರುದ್ಧ 33-29ರ ಗೆಲುವು ದಾಖಲಿಸಿದ್ರೆ, ಅಫ್ಘಾನಿಸ್ತಾನ ವಿರುದ್ಧದ ಕ್ರಿಕೆಟ್ ಪಂದ್ಯ ರದ್ದಾಗಿದ್ದರಿಂದ ಭಾರತಕ್ಕೆ ಚಿನ್ನದ ಪಕದ ನೀಡಲಾಯ್ತು. ಇನ್ನು ಪುರುಷರ ಬ್ಯಾಡ್ಮಿಂಟನ್ ಡಬಲ್ಸ್ ನಲ್ಲಿ ಭಾರತದ ಸಾತ್ವಿಕ್ ಸಾಯ್ ರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಜೋಡಿ, ಸೌತ್ ಕೊರಿಯಾದ ಚೋಯ್ ಸೋಲ್ಗ್ಯೂ ಮತ್ತು ಕಿಮ್ ವೊನ್ಹೊ ವಿರುದ್ಧ 21-18, 21-16ರ ಗೆಲುವು ದಾಖಲಿಸಿದ್ರೆ, ಮಹಿಳಾ ಕಬಡ್ಡಿ ಪಂದ್ಯದಲ್ಲಿ ಚೈನೀಸ್ ತೈಪೆಯನ್ನು 26-25 ಅಂತರದಿಂದ ಮಣಿಸಿರುವ ಭಾರತೀಯ ಮಹಿಳೆಯರು ಬಂಗಾರದ ಪದಕಕ್ಕೆ ಮುತ್ತಿಕ್ಕಿದ್ದಾರೆ.
ಈ ಚಿನ್ನದ ಪದಕದೊಂದಿಗೆ ಈ ಬಾರಿಯ ಏಷ್ಯನ್ ಗೇಮ್ಸ್ ನಲ್ಲಿ ಭಾರತ ಒಟ್ಟಾರೆ 100 ಪದಕಗಳ ಗಡಿ ದಾಟಿದೆ. ಈವರೆಗಿನ ಸ್ಪರ್ಧೆಗಳಲ್ಲಿ ಭಾರತ, 28 ಚಿನ್ನ, 36 ಬೆಳ್ಳಿ ಮತ್ತು 41 ಕಂಚಿನ ಪದಕಗಳು ಸೇರಿ ಒಟ್ಟಾರೆ 105 ಪದಕಗಳನ್ನು ಗೆದ್ದಿದೆ.
ಪುರುಷರ ಬ್ಯಾಡ್ಮಿಂಟನ್, ಕ್ರಿಕೆಟ್, ಕಬಡ್ಡಿ ಮತ್ತು ಮಹಿಳಾ ಕಬ್ಬಡ್ಡಿಯಲ್ಲದೆ; ಇತ್ತೀಚೆಗೆ ನಡೆದ ಪುರುಷರ ಆರ್ಚರಿಯಲ್ಲಿ ಓಜಾಸ್ ಪ್ರವೀಣ್, ಮಹಿಳಾ ಆರ್ಚರಿಯಲ್ಲಿ ಜ್ಯೋತಿ ಸುರೇಖಾ, ಪುರುಷರ ಹಾಕಿ ತಂಡ ಚಿನ್ನ ಗೆದ್ದಿತ್ತು.
ಈ ಬಾರಿಯ ಏಷ್ಯನ್ ಗೇಮ್ಸ್ ನಲ್ಲಿ ಭಾರತ 100+ ಪದಕಗಳ ಗಡಿ ದಾಟಿಸಿರೋದು ಏಷ್ಯನ್ ಗೇಮ್ಸ್ ಇತಿಹಾಸದಲ್ಲೇ ಭಾರತದ ಅತ್ಯುತ್ತಮ ಸಾಧನೆಯೆನಿಸಿದೆ. ಯಾಕಂದ್ರೆ, ಇದಕ್ಕೂ ಮುನ್ನ 2018ರಲ್ಲಿ ಜಕಾರ್ತಾ ಏಷ್ಯನ್ ಗೇಮ್ಸ್ ನಲ್ಲಿ ಭಾರತ ಒಟ್ಟಾರೆ 70 ಪದಕಗಳನ್ನು ಗೆದ್ದಿದ್ದು ಹಿಂದಿನ ದಾಖಲೆಯಾಗಿತ್ತು.
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ಪ್ರಚಲಿತ ಪೋಸ್ಟ್‌ಗಳು
ನಿಸರ್ಗವೇ ಬಿಡಿಸೋ ಅಚ್ಚರಿಯ ಶಿಲ್ಪ ಈ ಸ್ಟಾಲಕ್ಟೈಟ್, ಸ್ಟಾಲಗ್ಮೈಟ್!
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ಮನುಷ್ಯರ ಮುಖ ಹೋಲೋ ಈ ಮೀನಿನ ಹೆಸರು ಬ್ಲಾಬ್ಫಿಶ್ (ಈ ಜಗ-ಸೋಜಿಗ!)
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ